ಶುಭಾಶಯಗಳು

Welcome to DBAUPS Kayyar

Tuesday, 19 July 2016

ಗಾದೆಗಳು


ಕನ್ನಡ ಜನಪ್ರಿಯ ಗಾದೆಗಳು (Kannada Popular Proverbs (Janapriya Gaadegalu))


  1. ವೇದ ಸುಳ್ಳಾದರು ಗಾದೆ ಸುಳ್ಳಾಗದು.
  2. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
  3. ಕುಂಬಾರನಿಗೆ ವರುಷದೊಣ್ಣೆಗೆ ನಿಮಿಷ.
  4. ಎತ್ತು ಏರಿಗೆಳೀತುಕೋಣ ನೀರಿಗೆಳೀತು.
  5. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ
  6. ಕೈ ಕೆಸರಾದರೆ ಬಾಯಿ ಮೊಸರು.
  7. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
  8. ಮಾತು ಬೆಳ್ಳಿಮೌನ ಬಂಗಾರ.
  9. ಮಾತು ಮನೆ ಮುರಿತುತೂತು ಓಲೆ ಕೆಡಿಸಿತು.
  10. ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
  11. ಮನೆಗೆ ಮಾರಿಊರಿಗೆ ಉಪಕಾರಿ.
  12.  ಆಳಾಗಬಲ್ಲವನು ಅರಸನಾಗಬಲ್ಲ.
  13.  ಊರಿಗೆ ದೊರೆ ಆದರೂ ತಾಯಿಗೆ ಮಗನೆ.
  14.  ಹೆತ್ತವರಿಗೆ ಹೆಗ್ಗಣ ಮುದ್ದು.
  15.  ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆಬಾಗಿಲು ಹಾಕಿದರಂತೆ.
  16.  ಗಿಡವಾಗಿ ಬಗ್ಗದ್ದುಮರವಾಗಿ ಬಗ್ಗೀತೇ?
  17.  ಮಾಡೋದೆಲ್ಲ ಅನಾಚಾರಮನೆ ಮುಂದೆ ಬೃಂದಾವನ.
  18.  ಮನಸಿದ್ದರೆ ಮಾರ್ಗ.
  19. ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
  20. ಆರಕ್ಕೇರಲಿಲ್ಲಮೂರಕ್ಕೀಳಿಯಲಿಲ್ಲ.
  21. ಆರು ಕೊಟ್ಟರೆ ಅತ್ತೆ ಕಡೆಮೂರು ಕೊಟ್ಟರೆ ಸೊಸೆ ಕಡೆ.
  22. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
  23. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
  24. ಅತ್ತೆಗೊಂದು ಕಾಲಸೊಸೆಗೊಂದು ಕಾಲ.
  25. ಬೆಕ್ಕು ಕಣ್ಮುಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
  26. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
  27. ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
  28. ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
  29. ಜಲ ಶೋಧಿಸಿ ನೀರು ತರ್ಬೇಕುಕುಲ ಶೋಧಿಸಿ ಹೆಣ್ಣು ತರ್ಬೇಕು.
  30. ಚಿಂತೆ ಇಲ್ಲದವನಿಗೆ ಸನ್ತೇಲು ನಿದ್ದೆ.
  31. ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.
  32. ಹನುಮಂತಾನೆ ಬಾಲ ಕಡಿತಿರುವಾಗಇವನ್ಯಾವನೋ ಶಾವಿಗೆ ಕೇಳಿದನಂತೆ.
  33. ತುಂಬಿದ ಕೊಡ ತುಳುಕುವುದಿಲ್ಲ.
  34. ಹನಿ ಹನಿ ಸೇರಿದರೆ ಹಳ್ಳತೆನೆ ತೆನೆ ಸೇರಿದರೆ ಬಳ್ಳ.
  35. ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
  36. ಹುಚ್ಚರ ಮದುವೆಯಲ್ಲಿ ಉನ್ಡೋನೆ ಜಾಣ.
  37. ಜಾಣನಿಗೆ ಮಾತಿನ ಪೆಟ್ಟುದಡ್ಡನಿಗೆ ದೊಣ್ಣೆ ಪೆಟ್ಟು.

No comments:

Post a Comment