ಶುಭಾಶಯಗಳು

Welcome to DBAUPS Kayyar

Friday, 1 August 2014

 ತರಲೆ ಗಣಿತ
೧. ೬ ಅಡಿ ಉದ್ದ, ೩ ಅಡಿ ಅಗಲ, ೩ ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಅಡಿ ಮಣ್ಣು ಇದೆ?
(ಕ) ೫೪
(ಚ) ಸೊನ್ನೆ. ಹೊಂಡದಲ್ಲಿ ಮಣ್ಣು ಎಲ್ಲಿರುತ್ತೆ?
(ಟ) ೧೮
(ತ) ಯಾವುದೂ ಅಲ್ಲ.

೨. ರಾಮಣ್ಣನಲ್ಲಿ ೪ ಗೂಳಿಗಳಿವೆ. ಒಂದೊಂದು ಗೂಳಿಯೂ ಎರಡೆರಡು ಕರು ಹಾಕಿದರೆ ಒಟ್ಟು ಎಷ್ಟು ಕರುಗಳು ಆಗುತ್ತವೆ?
(ಕ) ೮
(ಚ) ೪
(ಟ) ಪ್ರಶ್ನೆಯಲ್ಲಿ ತಪ್ಪಿದೆ. ಗೂಳಿ ಕರು ಹಾಕುವುದಿಲ್ಲ.
(ತ) ಯಾವುದೂ ಅಲ್ಲ.
೩. ಭೀಮಣ್ಣನಲ್ಲಿ ಕೆಂಪು, ಕಪ್ಪು, ಹಳದಿ ಬಣ್ಣದ ಒಂದೊಂದು ಹುಂಜಗಳಿವೆ. ಒಂದೊಂದು ಹುಂಜವೂ ಐದೈದು ಮೊಟ್ಟೆ ಇಟ್ಟರೆ ಒಟ್ಟು ಎಷ್ಟು ಮೊಟ್ಟೆಗಳಾಗುತ್ತವೆ? ಮತ್ತು ಯಾವ ಯಾವ ಬಣ್ಣದ ಮೊಟ್ಟೆಗಳು ಎಷ್ಟಿರುತ್ತವೆ?
(ಕ) ಕೆಂಪು-೫, ಕಪ್ಪು-೫, ಹಳದಿ-೫, ಒಟ್ಟು ೧೫.
(ಚ) ಒಟ್ಟು ೧೫ ಮೊಟ್ಟೆಗಳು -ಎಲ್ಲವೂ ಬಿಳಿಯ ಬಣ್ಣದವು.
(ಟ) ಪ್ರಶ್ನೆಯಲ್ಲಿ ತಪ್ಪಿದೆ. ಹುಂಜ ಮೊಟ್ಟೆ ಇಡುವುದಿಲ್ಲ.
(ತ) ಯಾವುದೂ ಅಲ್ಲ.
೪. ಒಂದನೇ ತರಗತಿಯ ಮೇಡಮ್ಮಿಗೆ ಒಂದು ಗಂಡ ಆದರೆ ಎರಡನೇ ತರಗತಿಯ ಮೇಡಮ್ಮಿಗೆ ಎಷ್ಟು ಗಂಡ?
(ಕ) ೨
(ಚ) ೧
(ಟ) ಪ್ರಶ್ನೆ ಅಸಂಬದ್ಧವಾಗಿದೆ.
(ತ) ಯಾವುದೂ ಅಲ್ಲ.
೫. ಒಂದು ಬಟ್ಟೆ ಒಣಗಲು ೫ ಗಂಟೆ ಬೇಕಾದರೆ ೫ ಬಟ್ಟೆ ಒಣಗಲು ಎಷ್ಟು ಗಂಟೆ ಬೇಕು?
(ಕ) ೨೫
(ಚ) ೫
(ಟ) ಹೇಳಲು ಅಸಾಧ್ಯ. ಎಲ್ಲ ಬಟ್ಟೆಗಳೂ ಒಂದೇ ರೀತಿಯವು ಎಂದು ಏನು ಗ್ಯಾರಂಟಿ?
(ತ) ಯಾವುದೂ ಅಲ್ಲ.
೬. ಕ್ಯಾಪ್ಟನ್ ಕುಕ್ ೫ ಸಲ ಸಮುದ್ರಯಾನ ಮಾಡಿದನು. ಅದರಲ್ಲಿ ಒಂದು ಸಮುದ್ರಯಾನದಲ್ಲಿ ಸತ್ತನು. ಎಷ್ಟನೇ ಸಮುದ್ರಯಾನದಲ್ಲಿ ಆತ ಸತ್ತನು?
(ಕ) ೧ನೇ ಸಮುದ್ರಯಾನದಲ್ಲಿ.
(ಚ) ೫ನೇ ಸಮುದ್ರಯಾನದಲ್ಲಿ.
(ಟ) ೬ನೇ ಸಮುದ್ರಯಾನದಲ್ಲಿ.
(ತ) ಯಾವುದೂ ಅಲ್ಲ.
೭. ೧೯೮೦ರಲ್ಲಿ ರಾಮನು ಭೀಮನಿಗಿಂತ ಪ್ರಾಯದಲ್ಲಿ ೧೦ ವರ್ಷ ದೊಡ್ಡವನು. ೧೯೯೦ರಲ್ಲಿ ರಾಮನು ಭೀಮನಿಗಿಂತ ಪ್ರಾಯದಲ್ಲಿ ಎಷ್ಟು ದೊಡ್ಡವನು?
(ಕ) ೧೦ ವರ್ಷ.
(ಚ) ೨೦ ವರ್ಷ.
(ಟ) ಸೊನ್ನೆ.
(ತ) ಯಾವುದೂ ಅಲ್ಲ.
೮. ನನ್ನಲ್ಲಿ ಎರಡು ಹಾರ್ಡ್ ಡಿಸ್ಕ್‌ಗಳಿವೆ. ಅವುಗಳ ವಿವರಗಳು ಈ ರೀತಿ ಇವೆ -ಹಾರ್ಡ್ ಡಿಸ್ಕ್-೧: ಒಟ್ಟು ಸಂಗ್ರಹ ಶಕ್ತಿ ೧೦ ಗಿಗಾ ಬೈಟ್, ೨೫೦ ಮೆಗಾ ಬೈಟ್ ಉಪಯೋಗಿಸಲ್ಪಟ್ಟಿದೆ. ಹಾರ್ಡ್ ಡಿಸ್ಕ್-೨: ಒಟ್ಟು ಸಂಗ್ರಹ ಶಕ್ತಿ ೫ ಗಿಗಾ ಬೈಟ್, ಸಂಪೂರ್ಣವಾಗಿ ಉಪಯೋಗಿಸಲ್ಪಟ್ಟಿದೆ. ಇವುಗಳಲ್ಲಿ ಯಾವುದರ ತೂಕ ಹೆಚ್ಚು?
(ಕ) ಹಾರ್ಡ್ ಡಿಸ್ಕ್-೧.
(ಚ) ಹಾರ್ಡ್ ಡಿಸ್ಕ್-೨.
(ಟ) ಪ್ರಶ್ನೆ ಅಸಂಬದ್ಧವಾಗಿದೆ. ಹಾರ್ಡ್ ಡಿಸ್ಕಿನ ತೂಕಕ್ಕೂ, ಅದರ ಸಂಗ್ರಹ ಶಕ್ತಿಗೂ ಸಂಬಂಧವಿಲ್ಲ.
(ತ) ಯಾವುದೂ ಅಲ್ಲ.
೯. ಒಂದು ತಿಮಿಂಗಿಲ ದಿನಕ್ಕೆ ೩ ಮೊಟ್ಟೆಯಂತೆ ೧೦ದಿನಗಳ ಕಾಲ ಮೊಟ್ಟೆ ಇಡುತ್ತದೆ. ಒಂದು ಶಾರ್ಕ್ ಮೀನು ದಿನಾ ಒಂದೊಂದು ಮೊಟ್ಟೆಯನ್ನು ಕಬಳಿಸುತ್ತದೆ. ಕೊನೆಯಲ್ಲಿ ಒಟ್ಟು ಎಷ್ಟು ಮೊಟ್ಟೆಗಳು ಉಳಿದಿರುತ್ತವೆ?
(ಕ) ೩೦
(ಚ) ೨೦
(ಟ) ಪ್ರಶ್ನೆಯಲ್ಲಿ ತಪ್ಪಿದೆ. ತಿಮಿಂಗಿಲ ಮೊಟ್ಟೆ ಇಡುವುದಿಲ್ಲ.
(ತ) ಯಾವುದೂ ಅಲ್ಲ.
೧೦. ವೀರಪ್ಪನ್ ಬಳಿ ೫ ಹೆಣ್ಣಾನೆಗಳಿವೆ. ಪ್ರತಿಯೊಂದು ಆನೆಯಿಂದಲೂ ೪ ಅಡಿ ಉದ್ದದ ದಾಡೆಯನ್ನು ಆತ ಕತ್ತರಿಸಿದರೆ ಒಟ್ಟು ಎಷ್ಟು ಅಡಿ ಉದ್ದದ ದಂತ ಸಿಗುತ್ತದೆ?
(ಕ) ೪೦
(ಚ) ೨೦
(ಟ) ಪ್ರಶ್ನೆಯಲ್ಲಿ ತಪ್ಪಿದೆ. ಹೆಣ್ಣಾನೆಗೆ ದಾಡೆ ಇರುವುದಿಲ್ಲ.
(ತ) ಯಾವುದೂ ಅಲ್ಲ.
(೧೯೯೯)
ಸೂ: ಉತ್ತರಗಳನ್ನು ಕೆಳಗೆ ಬರೆಯಬಹುದು.

No comments:

Post a Comment