ವಿಜ್ಞಾನ ಹಾಸ್ಯ
ಪೀಸಾದ ಗೋಪುರ ವಾಲಿಕೊಂಡಿರುವುದರ ಬಗ್ಗೆ ವ್ಯಾಖ್ಯೆ “ಗೆಲಿಲಿಯೋ ಸ್ವರ್ಗಸ್ಥನಾದ ನಂತರ ನ್ಯೂಟನ್ ಹುಟ್ಟಿದುದು. ಆದ್ದರಿಂದ ಗೆಲಿಲಿಯೋಗೆ ನ್ಯೂಟನ್‌ನ ಮೂರನೆಯ ನಿಯಮ ಗೊತ್ತಿರಲಿಲ್ಲ. ಆತ ಪೀಸಾದ ಗೋಪುರ ಹತ್ತಿ ಭಾರವಾದ ಕಲ್ಲುಗಳನ್ನು ಎಸೆದ. ಇದರ ಪ್ರತಿಕ್ರಿಯೆಯಾಗಿ ಗೋಪುರ ವಾಲಿತು”ಗುರುತ್ತ್ವಾಕರ್ಷಣೆಯ ತತ್ತ್ವ ನ್ಯೂಟನ್‌ಗಿಂತ ಮೊದಲೇ ಭಾರತೀಯರಿಗೆ ಗೊತ್ತಿತ್ತು. ಅದು ಯಾವ ರೀತಿ ಎಂದರೆ “ನ್ಯೂಟನ್‌ನ ತಲೆಯ ಮೇಲೆ ಸೇಬಿನಹಣ್ಣು ಬಿದ್ದದ್ದರಿಂದ ಗುರುತ್ತ್ವಾಕರ್ಷಣ ತತ್ತ್ವದ ಜ್ಞಾನೋದಯವಾಯಿತೆಂಬುದು ಎಲ್ಲರಿಗೂ ತಿಳಿದ ವಿಷಯ. ನ್ಯೂಟನ್‌ಗೂ ಮುಂಚೆಯೇ ಭಾರತದ ಜ್ಞಾನಿಗಳಿಗೂ ಈ ಬಗ್ಗೆ ಜ್ಞಾನೋದಯವಾಗಿತ್ತು. ಭಾರತದ ಪಶ್ಟಿಮ ತೀರಗಳಲ್ಲಿ (ಕೇರಳ, ಗೋವಾ) ಸೇಬಿನ ಮರಗಳಿಲ್ಲ. ಜ್ಞಾನಿಗಳಿದ್ದರು. ಅವರಲ್ಲೊಬ್ಬನ (ಈ ಜ್ಞಾನಿಗೆ ಸ್ವಾಮೀ ಗುರುತ್ವಾನಂದ ಎಂದು ವಿಜ್ಞಾನಿ ಜಯಂತ್ ನಾರ್ಳಿಕರ್ ನಾಮಕರಣ ಮಾಡಿದ್ದಾರೆ.) ತಲೆಯ ಮೇಲೆ ಸೇಬಿನ ಬದಲು (ಅಲ್ಲಿ ಯಥೇಚ್ಛವಾಗಿ ಸಿಗುವ) ತೆಂಗಿನಕಾಯಿ ಬಿದ್ದಿತು. ಜ್ಞಾನೋದಯವೇನೋ ಆಯಿತು. ಆದರೆ ಅದನ್ನು ಇತರರಿಗೆ ತಿಳಿಸಿಕೊಡಲು ಆತ ಉಳಿಯಲಿಲ್ಲ……”
—- —-
ಅಧ್ಯಾಪಕ: ಆಮ್ಲಜನಕ ನಮಗೆ ಉಸಿರಾಡಲು ಬಹು ಮುಖ್ಯ. ಇದು ಇಲ್ಲದೆ ನಮಗೆ ಬದುಕಲು
ಅಸಾಧ್ಯ. ಆಮ್ಲಜನಕವನ್ನು ೧೮ನೆಯ ಶತಮಾನದ ಕೊನೆಗೆ ಪ್ರಿಸ್ಲಿ ಎಂಬ ವಿಜ್ಞಾನಿಯು
ಕಂಡುಹಿಡಿದನು.ವಿದ್ಯಾರ್ಥಿ: ಸಾರ್, ಅದಕ್ಕಿಂತ ಮೊದಲು ಜನರು ಹೇಗೆ ಬದುಕಿದ್ದರು?
—- —-
ಅಧ್ಯಾಪಕ: ನೀರಿನ ರಾಸಾಯನಿಕ ಸೂತ್ರ ಹೇಳು.ವಿದ್ಯಾರ್ಥಿ: H I J K L M N O
ಅಧ್ಯಾಪಕ: ಏನೋ ಅದು ನೀನು ಹೇಳುತ್ತಿರುವುದು?
ವಿದ್ಯಾರ್ಥಿ: ನೀವೇ ಹೇಳಿದ್ದಲ್ಲವೇ ಸಾರ್, ನೀರಿನ ರಾಸಾಯನಿಕ ಸೂತ್ರ ಎಚ್ ಟು ಒ (H to O) ಎಂದು?
—- —–
ವಿದ್ಯಾರ್ಥಿ: ಸಾರ್, ನೀವು ಹೇಳಿದ್ದಿರಿ, ಬೆಳಕು ಶಬ್ದಕ್ಕಿಂತ ವೇಗವಾಗಿ ಚಲಿಸುತ್ತದೆ ಎಂದು.ಅಧ್ಯಾಪಕ: ಹೌದು, ಯಾಕೆ?
ವಿದ್ಯಾರ್ಥಿ: ಅಂದರೆ ನಮ್ಮಿಂದ ಸ್ವಲ್ಪ ದೂರದಲ್ಲಿ ಒಂದು ಘಟನೆ ನಡೆದರೆ ಅದರ ದೃಶ್ಯ ಮೊದಲು ಕಾಣಿಸುತ್ತದೆ, ಶಬ್ದ ನಂತರ ಕೇಳಿಸುತ್ತದೆ ಎಂದು ಅರ್ಥ ಅಲ್ಲವೇ ಸಾರ್?
ಅಧ್ಯಾಪಕ: ಹೌದು. ಚೆನ್ನಾಗಿಯೇ ತಿಳಿದುಕೊಂಡಿದ್ದೀಯ.
ವಿದ್ಯಾರ್ಥಿ: ಆದರೆ ನಮ್ಮ ಮನೆಯಲ್ಲಿ ಇದಕ್ಕೆ ವಿರುದ್ಧವಾಗಿ ನಡೆಯುತ್ತಿದೆ.
ಅಧ್ಯಾಪಕ: ಹೌದೇ? ಅದು ಹೇಗೆ?
ವಿದ್ಯಾರ್ಥಿ: ನಾನು ಟಿ.ವಿ.ಯ ಸ್ವಿಚ್ ಹಾಕಿದಾಗ ಶಬ್ದ ಮೊದಲು ಬರುತ್ತದೆ, ಸ್ವಲ್ಪ ಸಮಯದ ನಂತರ ಚಿತ್ರ ಮೂಡಿಬರುತ್ತದೆ!
—- —–
ಅಧ್ಯಾಪಕ: ಸೂರ್ಯ ಮತ್ತು ಚಂದ್ರ -ಇವುಗಳಲ್ಲಿ ಯಾವುದು ನಮ್ಮಿಂದ ದೂರ ಇದೆ? ಯಾವುದು ಹತ್ತಿರ ಇದೆ?ವಿದ್ಯಾರ್ಥಿ: ಸೂರ್ಯ ಹತ್ತಿರ, ಚಂದ್ರ ದೂರ ಸಾರ್.
ಅಧ್ಯಾಪಕ: ಅದು ಹೇಗೋ?
ವಿದ್ಯಾರ್ಥಿ: ಸೂರ್ಯನ ಬೆಳಕು ತುಂಬ ಬಿಸಿ. ಚಂದ್ರನದು ತಂಪು. ಆದುದರಿಂದ ಸೂರ್ಯ ಹತ್ತಿರ ಚಂದ್ರ ದೂರ ಎಂದು ನಾವು ತೀರ್ಮಾನಿಸಬಹುದು.
—- —–
ಅಧ್ಯಾಪಕ: ಆಂಟಿಮನಿ ಎಂದರೇನು?ವಿದ್ಯಾರ್ಥಿ: ನಮ್ಮ ಮನೆಗೆ ಭೇಟಿ ಇತ್ತ ಆಂಟಿ ಕೊಟ್ಟ ಹಣ ಸಾರ್.
—- —-
ಅಧ್ಯಾಪಕ: ಅಮೋನಿಯಾ ಮತ್ತು ನ್ಯುಮೋನಿಯಾ ಬಗ್ಗೆ ಚುಟುಕಾಗಿ ಹೇಳು.ವಿದ್ಯಾರ್ಥಿ: ಅಮೋನಿಯಾ ಒಂದು ಅನಿಲ. ಅದನ್ನು ನೀರಿನಲ್ಲಿ ಕರಗಿಸಿದರೆ ಕ್ಷಾರವಾಗುತ್ತದೆ. ಆ ನೀರನ್ನು ಕುಡಿದರೆ ನ್ಯುಮೋನಿಯಾ ಬರುತ್ತದೆ.
—- —-
ಅಧ್ಯಾಪಕ: ಹುಳಿಮಳೆ ಎಂದರೇನು?ವಿದ್ಯಾರ್ಥಿ: ನಾವು ಶಾಲೆ ಬಿಡುವ ಹೊತ್ತಿಗೆ ಸರಿಯಾಗಿ ಮನೆಗೆ ಹೋಗುವಾಗ ಮಳೆಯಲ್ಲಿ ನೆನಯುವಂತೆ ಮಾಡಲು ಹುಳಿಬುದ್ಧಿಯಿಂದ ವರುಣದೇವ ಸುರಿಸುವ ಮಳೆ.
—- —-
ಅಧ್ಯಾಪಕ: ಅಲೆಕ್ಸಾಂಡರ್ ಗ್ರಹಾಂ ಬೆಲ್ ಟೆಲಿಫೋನ್ ಕಂಡುಹಿಡಿಯದಿದ್ದರೆ ಏನಾಗುತ್ತಿತ್ತು?ವಿದ್ಯಾರ್ಥಿ: ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಪದವಿ ಕಳೆದುಕೊಳುತ್ತಿರಲಿಲ್ಲ.
—- —–
ಅಧ್ಯಾಪಕ: ಜೇಮ್ಸ್ ವ್ಯಾಟ್ ಉಗಿಯಂತ್ರ ಕಂಡುಹಿಡಿಯದ್ದರೆ ಏನಾಗುತ್ತಿತ್ತು?ವಿದ್ಯಾರ್ಥಿ: ಹಲವಾರು ರೈಲು ಅಪಘಾತಗಳಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ.
—– —–
ಅಧ್ಯಾಪಕ: ಮೈಕೆಲ್ ಫಾರಡೆ ವಿದ್ಯುಚ್ಛಕ್ತಿ ಕಂಡುಹಿಡಿಯದಿದ್ದರೆ ಏನಾಗುತ್ತಿತ್ತು?ವಿದ್ಯಾರ್ಥಿ: ನಮಗೆ ಪರೀಕ್ಷೆಗೆ ಒಂದು ಪ್ರಶ್ನೆ ಕಡಿಮೆಯಾಗುತ್ತಿತ್ತು.
—- *** —
No comments:
Post a Comment