ಡೋನ್ ಬೋಸ್ಕೊ ಶಾಲೆಯ ಶಾಲಾ ಪಾರ್ಲಿಮೆಂಟ್ ಹಾಗೂ
ವಿವಿಧ ಕ್ಲಬ್‌ಗಳ ಉದ್ಘಾಟನೆ
ಕಯ್ಯಾರು: ೨೦೧೯-೨೦ ನೇ ಸಾಲಿನ ಕಯ್ಯಾರು ಡೋನ್ ಬೋಸ್ಕೊ ಎ.ಯು.ಪಿ. ಶಾಲೆಯ ಶಾಲಾ ಪಾರ್ಲಿಮೆಂಟ್ ಹಾಗೂ ವಿವಿಧ ಕ್ಲಬ್‌ಗಳ ಉದ್ಘಾಟನೆಯು ಇತ್ತೀಚಿಗೆ ನಡೆಯಿತು. ಶಾಲಾ ನಾಯಕಿಯಾಗಿ ಕು. ಅರಣ್ಯ ಟಿ ಶಾಜಿ ಹಾಗೂ ಉಪನಾಯಕನಾಗಿ ಪ್ರಸಿದ್ಧ ಎಂ. ಆಯ್ಕೆಯಾದರು. ವಿರೋಧ ಪಕ್ಷದ ನಾಯಕನಾಗಿ ಅಬ್ದುಲ್ ನೌಸಿಫ್, ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿಗಳಾಗಿ ಬಿಂದು ಮತ್ತು ಸಫೀನ, ಕ್ರೀಡಾ ಮಂತ್ರಿಯಾಗಿ ಇಸ್ಮಾಯಿಲ್, ಸಾಂಸ್ಕೃತಿಕ ಮಂತ್ರಿಯಾಗಿ ಡ್ಯಾನಿಕ ಪಹಲ್, ಆಹಾರ ಮಂತ್ರಿಯಾಗಿ ವೈಷ್ಣವಿ, ಸಾರಿಗೆ ಮಂತ್ರಿಗಳಾಗಿ ನಿಕೇತನ್ ಹಾಗೂ ಶ್ರಜ್ಞಶ್ರೀ, ಶುಚಿತ್ವ ಮಂತ್ರಿಯಾಗಿ ಶನ್ವಿತ ಮತ್ತು ಧನ್ಯಶ್ರೀ, ಲೈಬ್ರರಿ ಮಂತ್ರಿಗಳಾಗಿ ಪ್ರಜಕ್ತ, ಚಿಂತನ್, ನವ್ಯ, ಪ್ರಜ್ಞಶ್ರೀ, ಕೃಷಿ ಮಂತ್ರಿಗಳಾಗಿ ಆದಿತ್ಯ ಹಾಗೂ ಕಿಷನ್, ಶಿಸ್ತು ಮಂತ್ರಿಯಾಗಿ ತೇಜ್‌ವಾಲ್ ಮತ್ತು ಕಾವ್ಯ, ನೀರಾವರಿ ಮಂತ್ರಿಯಾಗಿ ಇಬ್ರಾಹಿಂ ಇಯ್ಯಾಸ್, ವಿದ್ಯಾಮಂತ್ರಿಯಾಗಿ ಮನಿಷ ಶೆಟ್ಟಿ ಹಾಗೂ ಸಾನಿಧ್ಯ, ಶಾಲಾ ಅಸೆಂಬ್ಲಿ ಮಂತ್ರಿಯಾಗಿ ಶೆಲ್ಡನ್ ಇವರು ಪ್ರಮಾಣವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಶಾಲಾ ಕ್ಲಬ್‌ಗಳಾದ ಸಮಾಜ, ವಿಜ್ಞಾನ, ಗಣಿತ, ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ, ಉರ್ದು, ಹಿಂದಿ, ಸಂಸ್ಕೃತ ಕ್ಲಬ್‌ಗಳ ಉದ್ಘಾಟನೆಯನ್ನು ಕ್ಲಬ್‌ನ ಸದಸ್ಯರು ವಿವಿಧ ಕಾರ್ಯಕ್ರಮಗಳೊಂದಿಗೆ ಚಾಲನೆ ನೀಡಿದರು ಹಾಗೂ ಪ್ಲಾಸ್ಟಿಕ್ ನಿರ್ಮೂಲನಾ ಯಜ್ಞದ ಅಂಗವಾಗಿ ಪೆನ್ ಡ್ರಾಪ್ ಬಾಕ್ಸ್ ಕಾರ್ಯಕ್ರಮವನ್ನು ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಮಾಗ್ದಲಿನ್ ಕ್ರಾಸ್ತಾ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪೀಟರ್ ರೊಡ್ರಿಗಸ್‌ರವರು ವಹಿಸಿದರು. ಈ ಕಾರ್ಯಕ್ರಮದಲ್ಲಿ ವಿನ್ಯಾಸ್ ಕೆ.ಎಚ್ ಸ್ವಾಗತಿಸಿ ನೌಸಿಫ್ ವಂದಿಸಿ ಅದ್ವಿತ್ ಮತ್ತು ಧನ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.
No comments:
Post a Comment