ಜಿಲ್ಲಾ ಕಲೋತ್ಸವದಲ್ಲಿ ಮಿಂಚಿದ ಡೋನ್ ಬೊಸ್ಕೊ ಶಾಲಾ ಕಲಾ ಪ್ರತಿಭೆಗಳು
ಕಯ್ಯಾರ್: ಚೆಮ್ನಾಡ್‌ನಲ್ಲಿ ಜರಗಿದ ಕಾಸರಗೋಡು ರೆವೆನ್ಯೂ ಜಿಲ್ಲಾ ಕಲೋತ್ಸವದ ಯು.ಪಿ.ಸಂಸ್ಕೃತ ಕಲೋತ್ಸವದಲ್ಲಿ ಅತ್ಯಧಿಕ 35 ಅಂಕಗಳೊಂದಿಗೆ ಶಾಲಾ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕಯ್ಯಾರಿನ ಡೋನ್ ಬೊಸ್ಕೊ ಎ.ಯು.ಪಿ.ಶಾಲೆಯು ಚಾಂಪ್ಯನ್ ಶಿಪ್ ಪಡೆದು ಕೊಂಡಿದೆ.
ಸಂಸ್ಕೃತ ಕಲೋತ್ಸವ ಯು.ಪಿ.ವಿಭಾಗದಲ್ಲಿ ವಿನ್ಯಾಸ್ .ಕೆ.ಎಚ್.[ಸಿದ್ದರೂಪೋಚರಣಂ ಎ.ಗ್ರೇಡ್ ಪ್ರಥಮ ] ದೀಕ್ಷಾ [ ಸಿದ್ದರೂಪೋಚರಣಂ ಹುಡುಗಿಯರ ವಿಭಾಗ ಎ.ಗ್ರೇಡ್ ಪ್ರಥಮ ] ವರ್ಷ ಆಳ್ವ [ ಪ್ರಶ್ನೋತ್ತರಿ ಎ..ಗ್ರೇಡ್ ಪ್ರಥಮ ,ಕಥಾ ರಚನೆ ಎ.ಗ್ರೇಡ್ ದ್ವಿತೀಯ, ಗಧ್ಯಪಾರಾಯಣಂ ಎ.ಗ್ರೇಡ್ ತೃತೀಯ] ಪ್ರಭೋಧ .ಬಿ. [ಕವಿತಾ ರಚನೆ ಎ.ಗ್ರೇಡ್ ದ್ವಿತೀಯ,] ಸಂಘಗಾನಂ [ಅದ್ವಿತ್ ,ಆನ್ಸನ್ ಕ್ರಿಸ್ ಡಿಸೋಜ,ಯಜ್ಞೇಶ್ , ನಿಧಿ ಆರ್ ಶೆಟ್ಟಿ ,ವಿನೀಶಾ ರೊಡ್ರೀಗಸ್ , ದೀಕ್ಷಾ ವಿ.ಎಸ್, ಅಶ್ವಿನಿ.ಇ, ಎ.ಗ್ರೇಡ್ ತೃತೀಯ]
ಯು.ಪಿ ಜನರಲ್ ವಿಬಾಗದಲ್ಲಿ ನಿಧಿ ಆರ್ ಶೆಟ್ಟಿ [ಹಿಂದಿ ಪ್ರಸಂಗ ಎ.ಗ್ರೇಡ್ ಪ್ರಥಮ] ದೇಶ ಭಕ್ತಿ ಗೀತೆ [ ಶ್ರೇಯ ಕೆ.ಜಿ ,ಅಶ್ವಿನಿ.ಇ, ಪ್ರಭೋಧ.ಬಿ ,ರಕ್ಷಾ ಕುಮಾರಿ, ದೀಕ್ಷಾ ವಿ.ಎಸ್., ರಿಶಾ ಡಿಸೋಜ, ಸ್ತುತಿ.ಎಸ್.ಶೆಟ್ಟಿ ಎ.ಗ್ರೇಡ್ ತೃತೀಯ ] ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಜಿಲ್ಲಾ ಕಲೋತ್ಸವದಲ್ಲಿ ಭಾಗವಹಿಸಿ ಚಾಂಪ್ಯನ್ ಶಿಪ್ ಪಡೆದ ವಿದ್ಯಾರ್ಥಿಗಳನ್ನು ಹಾಗೂ ತರಭೇತಿ ನೀಡಿದ ಸಂಸ್ಕೃತ ಶಿಕ್ಷಕಿ ಶ್ರೀಮತಿ ಪ್ರಸೀದ ಕೆ.ಸಿ.ಹಾಗೂ ಎಲ್ಲಾ ಶಿಕ್ಷಕರನ್ನು ಶಾಲಾ ಸಂಚಾಲಕರು,ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ - ರಕ್ಷಕರು ಅಭಿನಂಧಿಸಿದ್ದಾರೆ.

No comments:
Post a Comment