ಶುಭಾಶಯಗಳು

Welcome to DBAUPS Kayyar

Saturday, 23 July 2016

PTA ಮಹಾಸಭೆ

W3.CSS

ಶಾಲಾ ರಕ್ಷಕ ಶಿಕ್ಷಕ ಸಂಘದ ಮಹಾಸಭೆ

ತಾರೀಕು 23-07-2016ರಂದು ಡೋನ್ ಬೋಸ್ಕೋ ಎ ಯು ಪಿ ಶಾಲೆಯಲ್ಲಿ ಪ್ರಸಕ್ತ ವರ್ಷದ ರಕ್ಷಕ ಶಿಕ್ಷಕ ಸೊಂಘ್ದ ಮಹಾಸಭೆಯನ್ನು ನಡೆಸಲಾಯಿತು .ಸಂಪನ್ಮೂಲ ವ್ಯಕ್ಯಿಯಾಗಿ ಭಾಗವಹಿಸಿದ ಕಾಸರಗೋಡು ಕಾನೂನು ಸೇವಾ ಪ್ರಾಧಿಕಾರದ ಅಧಿಕಾರಿ  ದಿನೇಶ್. ಕೆ ಅವರು ಮಕ್ಕಳ ಮೇಲೆ ದೌರ್ಜನ್ಯ , ಬಾಲ್ಯ ವಿವಾಹ , ಮಕ್ಕಳ ದುಡಿಮೆ , ಹೀಗೆ ಮಕ್ಕಳ ಸಂರಕ್ಷಣೆಗಿರುವ ಕಾನೂನು ಮತ್ತು ಅಗತ್ಯದ ಕುರಿತು ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಂ. ಸ್ವಾಮಿ ವಿಕ್ಟರ್ ಡಿ ಸೋಜ ರವರು ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಧ್ಯಾಯರಾದ ಶ್ರೀ ಲೂಯಿಸ್ ಮೊಂತೇರೋ ರವರು ಉಪಸ್ಥಿತರಿದ್ದು ಅಗತ್ಯದ ಸಲಹೆ ಸೂಚನೆ ನೀಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗಿರೀಶ್ ಕಯ್ಯಾರ್ , MPTA ಅಧ್ಯಕ್ಷೆ ಶ್ರೀಮತಿ ಶ್ರೀದೇವಿ ಉಪಸ್ಥಿತರಿದ್ದರು. ಶಿಕ್ಷಕಿ ಮಾಗ್ದಲೆನ್ ವರದಿ ಓದಿದರು. ಶಿಕ್ಷಕ ಪೀಟರ್ ರೋಡ್ರಿಗಸ್ ಲೆಕ್ಕ ಪತ್ರ ಮಂಡಿಸಿದರು. ಅದೇ ರೀತಿ ನಮ್ಮ ಶಾಲೆಯಿಂದ  ಸ್ಪೋರ್ಟ್ಸ್ ಹಾಸ್ಟೆಲ್ಗೆ  ಆಯ್ಕೆಯಾದ  ವಿನೀತ್ ರಾಜ್ ನನ್ನು ಶಾಲಾ ಸಂಚಾಲಕರು ಸನ್ಮಾನಿಸಿದರು.
ಬಳಿಕ ನಡೆದ ರಕ್ಷಕ ಶಿಕ್ಷಕ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀ ಸ್ಟೀಫನ್ ಹಾಗೂ ಮಾತೆಯರ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ವಿಲ್ಮಾ ಆಯ್ಕೆಯಾದರು.
ಈ ಕಾರ್ಯಕ್ರಮವನ್ನು ಶ್ರೀ ಲೂಯಿಸ್ ಮೊಂತೆರೋ ಸ್ವಾಗತಿಸಿ, ಶಿಕ್ಷಕಿ ಶಾಲಿನಿ ಡಿ ಸೋಜ ನಿರೂಪಿಸಿ , ಲ್ಯಾನ್ಸಿ ಡಿ ಸೋಜ ವಂದಿಸಿದರು.

No comments:

Post a Comment