ವಾಚನಾ ಸಪ್ತಾಹ ಮತ್ತು ವಿವಿಧ ಕ್ಲಬ್ ಗಳ ಉದ್ಘಾಟನೆ
-------------------------------------------------------------------------------------------
ಕಯ್ಯಾರ್: ಪಿ.ಎನ್.ಪಣಿಕ್ಕಾರ್ ಸ್ಮರಣಾರ್ಥ ವಾಚನಾ ವಾರ ಮತ್ತು
ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮವು ಡೋನ್ ಬೊಸ್ಕೊ ಎ.ಯು.ಪಿ ಶಾಲೆಯಲ್ಲಿ
ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಸಂಚಾಲಕರಾದ ವಂದನೀಯ ಸ್ವಾಮಿ ವಿಕ್ಟರ್ ಡಿ’ಸೋಜ
ರವರು ಪಿ.ಎನ್.ಪಣಿಕ್ಕಾರ್ ರವರ ಭಾವಚಿತ್ರವನ್ನು ಅನಾವರಣ ಗೊಳಿಸಿ ಉದ್ಘಾಟಿಸಿ ಮಾತನಾಡಿದರು .ರಕ್ಷಕ
ಶಿಕ್ಷಕ ಸಂಘದ ಅಧ್ಯಕ್ಷರಾದ ಗಿರೀಶ್ ಕಯ್ಯಾರ್ ರವರು ಮಕ್ಕಳಿಗೆ ಲೈಬ್ರೆರಿ ಪುಸ್ತಕ ವಿತರಿಸಿ.¸ಶುಭ ಹಾರೈಸಿದರು. ಶಿಕ್ಷಕಿ
ಜಾಸ್ಮಿನ್ ರವರು ವಾಚನಾ ಸಪ್ತಾಹದ ಕುರಿತು ಮಕ್ಕಳಿಗೆ ತಿಳುವಳಿಕೆ ನೀಡಿದರು.ಕಾರ್ಯಕ್ರಮದ
ಅಧ್ಯಕ್ಷ ಸ್ಥಾನವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಲುವಿಸ್ ಮೊಂತೇರೊರವರು ವಹಿಸಿ ವಾಚನಾ
ಸಪ್ತಾಹಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಶಾಲಾ ವಿವಿಧ ಕ್ಲಬ್ ಗಳಾದ ,ಸಮಾಜ, ಸಂಸ್ಕ್ರತ
,ಉರ್ದು , ಇವುಗಳ ಉದ್ಘಾಟನೆ ನಡೆಯಿತು. ವಾಚನ ಸಪ್ತಾಹದ ಅಂಗವಾಗಿ ನಮ್ಮ ದೇಶದ ಕುರಿತು ಒಂದು
ವಿಡಿಯೋ ಕ್ಲಿಪ್ ಪ್ರದರ್ಶಿಸಲಾಯಿತು,ಜನರಲ್
ಕ್ವಿಜ್ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಿಡಲಾಯಿತು. ವಿದ್ಯಾರ್ಥಿ ಆನ್ಸನ್ ಡಿಸೋಜ
ಸ್ವಾಗತಿಸಿ,ಕೀರ್ತೆಶ್ ವಂದಿಸಿ ,ಹಸೀನ ಮತ್ತು ಯಜ್ನೇಶ್ ಕಾರ್ಯಕಮ ನಿರೂಪಿಸಿದರು. ಶಿಕ್ಷಕಿ ಶ್ರೀ
ಮತಿ ಯವರ ಮುಂದಾಳತ್ವದಲ್ಲಿ ಕಾರ್ಯಕ್ರಮ ಜರಗಿತು.
No comments:
Post a Comment