ಶುಭಾಶಯಗಳು

Welcome to DBAUPS Kayyar

Sunday, 12 October 2014

ಪರಿಣಾಮಕಾರಿ ಸೂಕ್ಷ್ಮ ಜೀವಿಗಳು:

ಪರಿಣಾಮಕಾರಿ ಸೂಕ್ಷ್ಮ ಜೀವಿಗಳು:


ಸಸ್ಯ ತನ್ನ ಬೇರುಗಳ ಮುಖಾಂತರ ಕಾರ್ಬೋಹೈಡ್ರೇಟ್ಅಮೈನೋ ಆಮ್ಲಸಾವಯವ ಆಮ್ಲಗಳನ್ನುಹೊರಹಾಕುತ್ತಿರುತ್ತವೆ
ಇವುಗಳನ್ನು   ಬಳಸಿಕೊಂಡು  ಪರಿಣಾಮಕಾರಿ ಸೂಕ್ಷ್ಮಜೀವಿಗಳುವೃದ್ಧಿಸುತ್ತವೆಇವು ಸಸ್ಯಗಳಿಗೆ ನ್ಯೂಕ್ಲಿಕ್ ಆಮ್ಲ,
 ವೈಟಮಿನ್ ಮತ್ತು ಹಾರ್ಮೋನುಗಳನ್ನು ಒದಗಿಸುತ್ತವೆ.ಆಗ ಸಸ್ಯ ಸಮೃದ್ಧಿಯಾಗಿ ಬೆಳೆಯುತ್ತವೆವಿಶೇಷವಾಗಿ  ಪರಿಣಾಮಕಾರಿ 
ಸೂಕ್ಷ್ಮಜೀವಿಗಳುರೋಗಗಳನ್ನು ತಡೆಯುವ ಸಾಮರ್ಥ್ಯ ಪಡೆದಿರುತ್ತದೆಇದರಿಂದ ಇಂದು ಬೇಸಾಯಪಶುಸಂಗೋಪನೆಗಳಲ್ಲಿ ಸಾಕಷ್ಟು ಮುನ್ನಡೆ 
ಸಾಧಿಸಬಹುದು.
ಹಣ್ಣು, ತರಕಾರಿಗಳನ್ನು ನಮಗೆ ಬೇಕಾದ ಆಕಾರ, ಗಾತ್ರ ಮತ್ತು ಬಣ್ಣಗಳಲ್ಲಿ ಬೆಳೆಯುವ ತಂತ್ರಜ್ಞಾನ ಇಂದು ಒದಗಿದೆ. ಹೀಗೆ ಮಾಡಲು ವಿವಿಧ ರೀತಿಯ ಬೇಸಾಯ ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಬೇಸಾಯ ಬೆಳೆಗಳನ್ನು ರೋಗದಿಂದ ಮುಕ್ತಗೊಳಿಸಲು ರೋಗ ನಿಯಂತ್ರಿಸುವ ರಸಾಯನಿಕಗಳನ್ನು ಮತ್ತು ಬೆಶಐ ಭೇಳೆಗಳಲ್ಲಿ ಬೆಳೆಯುವ ಅನುಪಯುಕ್ತ ಸಸ್ಯಗಳನ್ನು (ಕಳೆಗಳು) ನಿಯಂತ್ರಿಸಲು ಅನೇಕ ರಾಸಾಯನಿಕ ವಸ್ತುಗಳನ್ನು ಪ್ರಯೋಗಿಸುತ್ತಾರೆ. ಹೆಚ್ಚು ಇಳುವರಿ ಗಳಿಸುವ ಉದ್ದೇಶದಿಂದ ಸಸ್ಯಗಳ ಮೇಲೆ ಇಂತಹ ಒತ್ತಡ ಹೇರಲಾಗುತ್ತದೆ. ವ್ಯವಸಾಯದಲ್ಲಿ ಬಳಸುವ ರಾಸಾಯನಿಕಗಳು ಗಾಳಿ, ನೀರು ಮತ್ತು ನೆಲವನ್ನು ಕಲುಷಿತಗೊಳಿಸುತ್ತದೆ. ಇಂತಹ ವಿಷಮ ಸ್ಥಿತಿಯಲ್ಲಿ ಪರಿಣಾಮಕಾರಿ ಸೂಕ್ಷ್ಮ ಜೀವಿಗಳ ಪಾತ್ರ ಅತಿಮುಖ್ಯ.
ಸಾವಯವ ಕೃಷಿ ವಿಧಾನದಲ್ಲಿ ಬೇಸಾಯ ಮಾಡಿ ಬೆಳೆದ ಸಸ್ಯಗಳಿಂದ ಪಡೆದ ಪದಾರ್ಥಗಳ ಬಳಕೆ, ಆರೋಗ್ಯದ ದೃಷ್ಠಿಯಿಂದ ಒಳ್ಳೆಯದೆಂಬುದು ನಿರ್ವಿವಾದ. ೧೯೮೦ ರಲ್ಲಿ  ಜಪಾನಿನ ಪ್ರೊಫೆಸರ್ ಒಬ್ಬರು ಈ ಪರಿಣಾಮಕಾರಿ ಜೀವಿಗಳನ್ನು, ಮಾನವನ ಆರೋಗ್ಯ ಕಾಪಾಡುವಲ್ಲಿ, ಪರಿಸರ ಕಾಪಾಡುವಲ್ಲಿ, ಕಾರ್ಖಾನೆಗಳಲ್ಲಿ ಬಳಸಲಾಗುತ್ತಿದೆ ಎಂದು ವಿಶದಪಡಿಸಿದ್ದರು. ಇಂತಹ ಪರಿಣಾಮಕಾರಿ ಸೂಕ್ಷ್ಮಜೀವಿಗಳನ್ನು ಪ್ರಪಂಚದ ಜನತೆಗೆ ಪರಿಚಯಿಸಿದ್ದು ಥೈಲೆಂಡಿನಲ್ಲಿ ನಡೆದ ಅಂತರಾಷ್ಟ್ರೀಯ ಸಮಾವೇಶದಲ್ಲಿ. ಇದೀಗ ಏಷ್ಯಾ ಪೆಸಿಫಿಕ್‌ನ ಹದಿಮೂರು ದೇಶಗಳಲ್ಲಿ ಇಂತಹ ಉಪಯುಕ್ತ ಪರಿಣಾಮಕಾರಿ ಸೂಕ್ಷ್ಮಜೀವಿಗಳನ್ನು ಪ್ರಯೋಗ ಮಾಡಲಾಗುತ್ತಿದೆ. ಅಲ್ಲದೆ ಅಮೆರಿಕ, ಯುರೋಪ್,ಆಫ್ರಿಕಾ, ಓಷಿಯಾನಿಯ,ದೇಶಗಳಲ್ಲಿಯೂ ಬಳಸಲಾಗುತ್ತಿದೆ.
ಲಾಕ್ಟೋಬ್ಯಾಸಿಲಸ್ (Lactobacillus) (ಲ್ಯಾಕ್ಟಿಕ್ ಆಮ್ಲದ ಬ್ಯಾಕ್ಟೀರಿಗಳು) ರೋಡೋಸುಡೋಮೊನಾಸ್ (Rhodopseudomonas) (ಫೋಟೊಟ್ರೋಪಿಕ್ (phototrophic) ಬ್ಯಾಕ್ಟೀರಿಯಾಗಳು) ಮತ್ತು ಸ್ಯಾಕ್ಯರೋಮೈಸಿಸ್ (Saccharomyces) (ಯೀಸ್ಟ್) ಮುಂತಾದುವುಗಳನ್ನು ಪರಿಣಾಮಕಾರಿ ಸೂಕ್ಷ್ಮಜೀವಿಗಳೆಂದು ಹೇಳಲಾಗುತ್ತಿದೆ. ಇಂತಹ ಬ್ಯಾಕ್ಟೀರಿಯಾಗಳಲ್ಲಿಯೂ ಏರೋಬಿಕ್ (Aerobic)ಬ್ಯಾಕ್ಟೀರಿಯಾಗಳು (ಆಮ್ಲಜನಕ ಸಹಿತ ಪರಿಸರದಲ್ಲಿ ಜೀವಿಸುವ ಬ್ಯಾಕ್ಟೀರಿಯಾಗಳು) ಮತ್ತೂ ಅನೇರೋಬಿಕ್ (Anaerobic)ಬ್ಯಾಕ್ಟೀರಿಯಾಗಳು (ಆಮ್ಲಜನಕ ರಹಿತ ಪರಿಸರದಲ್ಲಿ ಜೀವಿಸುವ ಬ್ಯಾಕ್ಟೀರಿಯಾಗಳು) ಇವೆ. ಸಾಮಾನ್ಯವಾಗಿ ಈ ಪರಿಣಾಮಕಾರಿ ಸೂಕ್ಷ್ಮಜೀವಿಗಳು ಮಾನವ ಹಿತ ಜೀವಿಗಳೆಂದು ಮತ್ತು ರೋಗ ಅಥವ ವಿಷಕಾರಕಗಳಲ್ಲವೆಂದು ಹೇಳಬಹುದು.
ಭೂಮಿಯಲ್ಲಿರುವ ಪರಿಣಾಮಕಾರಿ ಸೂಕ್ಷ್ಮಜೀವಿಗಳು:
ದ್ಯುತಿ ಸಂಶ್ಲೇಷಣೆ ಮಾಡಿ ತಮ್ಮ ಆಹಾರವನ್ನು ತಯಾರು ಮಾಡುವ ಕೆಲವು ಸ್ವತಂತ್ರ ಬ್ಯಾಕ್ಟೀರಿಯಾಗಳು ಗಿಡಗಳು ಬೇರಿನಿಂದ ಸ್ರವಿಸಲ್ಪಟ್ಟ ಉಪಯುಕ್ತ ಅಮೈನೋ ಆಮ್ಲ,ನ್ಯೂಕ್ಲಿಕ್  ಆಮ್ಲ,ಜೈವಿಕ ಕ್ರಿಯಾತ್ಮಕ ವಸ್ತುಗಳು ಮತ್ತು ಕಾರ್ಬೋಹೈಡ್ರೇಟಗಳನ್ನು ಸಸ್ಯವು ಬಳಸಿಕೊಳ್ಳುತ್ತದೆ. ಹೀಗೆ ಬೇರಿನ ಸುತ್ತಲಿರುವ ನೈಟ್ರೋಜನ್ ಪದಾರ್ಥಗಳು ಹೆಚ್ಚಾಗುವುದರಿಂದ ‘ವೈಸಿಕ್ಯುಲಾರ್ ಆರ‍್ಬಸ್‌ಕ್ಯುಲಾರ್’(Vesicular – arbusvular) ಸಸ್ಯ ಬೇರಿನ ಬೂಸ್ಟುಗಳು ಹೆಚ್ಚಾಗುತ್ತವೆ. ಇವುಗಳಿಗೆ VAM ಎಂದು ಕರೆಯಲಾಗುತ್ತದೆ.  ಇವು ಫಾಸ್ಫೇಟ್ ಕರಗಿಸಿ ಹೀರಿಕೊಳ್ಳುವ ವಿಧಾನವನ್ನು ಅಳವಡಿಸಿಕೊಂಡಿವೆ. ಈ ‘ವ್ಯಾಮ್’ (VAM) ಬೂಸ್ಟುಗಳು ಸಾಮಾನ್ಯವಾಗಿ ಅಜಟೋಬ್ಯಾಕ್ಟೀರಿಯಾಗಳ ಜೊತೆಗೆ ಬೆಳೆಯುತ್ತವೆ. ಅಜಟೋಬ್ಯಾಕ್ಟೀರಿಯಾ(Azatobacteria)ಗಳು ಸ್ವತಂತ್ರವಾಗಿ ನೈಟ್ರೋಜನ್ ಹೀರಿಕೊಳ್ಳುವ ಸಾಮರ್ಥ್ಯವನ್ನು ಪಡೆದಿವೆ.
ಲ್ಯಾಕ್ಟಿಕ್ ಆಮ್ಲದ ಬ್ಯಾಕ್ಟೀರಿಯಾಗಳು
ಲ್ಯಾಕ್ಟೋಬ್ಯಾಸಿಲೈ ಬ್ಯಾಕ್ಟೀರಿಯಾಗಳು, ಶರ್ಕರಗಳಿಂದ ಲ್ಯಾಕ್ಟಿಕ್ ಆಮ್ಲವನ್ನು ಉತ್ಪತ್ತಿಮಾಡುತ್ತವೆ. ಇವುಗಳನ್ನು ಬಳಸಿ ಚೀಸ್, ಯೊಗರ್ಟ್ (Cheese, Yoghurt) (ಮೊಸರಿನಂತಹ ಪದಾರ್ಥ), ಉಪ್ಪಿನಕಾಯಿ ಮುಂತಾದವುಗಳನ್ನು ತಯಾರಿಸುತ್ತಾರೆ. ಲ್ಯಾಕ್ಟಿಕ್ ಆಮ್ಲವು ವಿಷಕಾರಕ ಜೀವಿಗಳನ್ನು ನಿಯಂತ್ರಿಸುತ್ತದೆ. ಸೂಕ್ಷ್ಮಜೀವಿಗಳಿಂದಾಗುವ ವಿಘmನಾಕ್ರಿಯೆಯನ್ನು ಹೆಚ್ಚು ಮಾಡುತ್ತದೆ. ಲಿಗ್ನಿನ್ ಮತ್ತು ಸೆಲ್ಯುಲೋಸನ್ನು ನಶಿಸಲು ಸಹಾಯ ಮಾಡುತ್ತದೆ., ವಿಶೇಷವಾಗಿ ಪ್ಯುಸೇರಿಯಂ (Fusarium) ಬೆಳವಣಿಗೆಗೆ ತಡೆಯೊಡ್ಡುತ್ತದೆ. ಪ್ಯುಸೇರಿಯಂ ಒಂದು ರೋಗಕಾರಕ ಬೂಸ್ಟು. ಇದು ಭೂಮಿಯಲ್ಲಿ ಹೆಚ್ಚಿದಂತೆ ದುಂಡು ಹುಳುಗಳು ಹೆಚ್ಚಾಗುತ್ತವೆ.
ಯೀಸ್ಟಗಳು : ಇವು ಸ್ವತಂತ್ರವಾಗಿ ಜೀವಿಸುವ ಬ್ಯಾಕ್ಟೀರಿಯಾಗಳು ಸ್ರವಿಸಿದ ಶರ್ಕರಗಳು, ಅಮೈನೋ ಆಮ್ಲಗಳನ್ನು ಬಳಸಿ ವೃದ್ಧಿಯಾಗುತ್ತವೆ. ಯೀಸ್ಟ್‌ಗಳಿಂದ ತಯಾರಾದ ಹಾರ್ಮೋನ್ ಮತ್ತು ಕಿಣ್ವಗಳು ಸಸ್ಯಗಳಲ್ಲಿ ಕ್ರಿಯಾತ್ಮಕ ಕೋಶ ವಿಭಜನೆಯಲ್ಲಿ ಭಾಗವಹಿಸುತ್ತವೆ. ಜೊತೆಗೆ ಲ್ಯಾಕ್ಟಿಕ್ ಆಮ್ಲದ ಬ್ಯಾಕ್ಟೀರಿಯಾಗಳು ಮತ್ತು ಆಕ್ಟಿನೋಮೈಸೀಟ್ಗಳ ವೃದ್ಧಿಗೂ ಇದನ್ನು ಬಳಸಲಾಗುತ್ತದೆ. ಒಟ್ಟಾರೆ, ಯೀಸ್ಟ್‌ಗಳು ಸೂಕ್ಷ್ಮಜೀವಿ ನಿಯಂತ್ರಣ ಮತ್ತು ಸಸ್ಯ ಬೆಳವಣಿಗೆಗೆ ಬೇಕಾದ ಉಪಯುಕ್ತ ವಸ್ತುಗಳನ್ನು ತಯಾರಿಸುತ್ತವೆ ಎಂದಾಯಿತು.
ಆಕ್ಟಿನೋಮೈಸೀಟ್ಗಳು (Actinomycetes): ಇವು ಬ್ಯಾಕ್ಟೀರಿಯಾ ಗುಂಪಿಗೆ ಸೇರಿದ ಜೀವಿಗಳು. ರಚನೆಯಲ್ಲಿ ಇವು ಬೂಸ್ಟು ಹಾಗೂ ಬ್ಯಾಕ್ಟೀರಿಯಾಗಳನ್ನು ಹೋಲುತ್ತವೆ. ಸಾಮಾನ್ಯವಾಗಿ ಆಕ್ಟಿನೋಮೈಸೀಟ್ ಬ್ಯಾಕ್ಟೀರಿಯಾಗಳು ಸ್ರವಿಸಿದ ರಸಾಯನಿಕಗಳು ಸೂಕ್ಷ್ಮಜೀವಿನಾಶಕಗಳು. ಇವು ರೋಗವನ್ನುಂಟು ಮಾಡುವ ಬೂಸ್ಟುಗಳನ್ನು ಮತ್ತು ಬ್ಯಾಕ್ಟೀರಿಯಾಗಳನ್ನು ಹತೋಟಿಯಲ್ಲಿಡುತ್ತವೆ. ಇವು ಸ್ವತಂತ್ರ ಜೀವಿ ಬ್ಯಾಕ್ಟೀರಿಯಾಗಳ ಜೊತೆ ಸಹಬಾಳ್ವೆ ನಡೆಸುತ್ತವೆ. ಆಕ್ಟಿನೋಮೈಸೀಟ್‌ಗಳು ಸಸ್ಯ ಬೆಳವಣಿಗೆಗೆ ಬೇಕಾದ ಗುಣಮಟ್ಟದ ಜಮೀನನ್ನು ಸಿದ್ಧಮಾಡಲು ಸಹಕಾರಿಯಯಾಗುತ್ತವೆ.
ಹುದುಗಿಸುವ ಬೂಸ್ಟುಗಳು: ಹುದುಗಿಸುವ ಬೂಸ್ಟುಗಳಲ್ಲಿ ಆಸ್ಪರ‍್ಜಿಲ್ಲಸ್ ಮತ್ತು ಪೆನಿಸಿಲಿಯಂ (Aspergillus and Penicillium) ಜೀವಿಗಳು ಮುಖ್ಯವಾದವು. ಇವು ಸಾವಯವ ವಸ್ತುಗಳನ್ನು ವಿಘಟಿಸುವಂತೆ ಮಾಡುತ್ತವೆ. ಇವುಗಳು ಮದ್ಯಸಾರ, ಎಸ್ಟರ್ ಮತ್ತು ಸೂಕ್ಷ್ಮಜೀವಿ ವಿನಾಶಕಗಳನ್ನು ತಯಾರಿಸುತ್ತವೆ. ಸಾವಯವ ವಸ್ತುಗಳ ನಶಿಸುವಿಕೆಯಲ್ಲಿ ಉತ್ಪತ್ತಿಯಾಗುವ ಕೆಟ್ಟವಾಸನೆಯನ್ನು ತಡೆಯುತ್ತವೆ. ಅಲ್ಲದೆ ಕೀಟಗಳು ಮತ್ತು ಮ್ಯಾಗಟ್ ನೊಣಗಳ ಹಾವಳಿಯನ್ನು ನಿಯಂತ್ರಣದಲ್ಲಿಡುತ್ತವೆ.
ಬೇಸಾಯದಲ್ಲಿ ಪರಿಣಾಮಕಾರಿ ಸೂಕ್ಷ್ಮಜೀವಿಗಳು:
ಸಾವಯವ ಕೃಷಿ ವಿಧಾನದಲ್ಲಿ ಇಳುವರಿ ಸಾಮಾನ್ಯವಾಗಿ ಕಡಿಮೆಯಿರುತ್ತದೆ. ಆದುದರಿಂದ ಸಸ್ಯಬೆಳವಣಿಗೆ ಮತ್ತು ಸಸ್ಯ ಇಳುವರಿ ಹೆಚ್ಚಿಸಲು ಈ ಲಾಭದಾಯಕ ಸೂಕ್ಷ್ಮಜೀವಿಗಳನ್ನು ಬೇಸಾಯ ಜಮೀನಿನಲ್ಲಿ ಅಳವಡಿಸಲಾಗುತ್ತದೆ.
ಹೀಗೆ ಅಳವಡಿಸುವುದರಿಂದ ಸಸ್ಯ ಇಳುವರಿ ಮತ್ತು ಸೂಕ್ಷ್ಮ ಜೀವಿಗಳ ಪರಿಸರವು ತೃಪ್ತಿಕರವಾಗಿರುತ್ತದೆ.
ಪರಿಣಾಮಕಾರಿ ಸೂಕ್ಷ್ಮಜೀವಿಗಳಿಂದ ಬೇಸಾಯದಲ್ಲಿ ಆಗುವ ಪ್ರಯೋಜನಗಳು:
- ಬೀಜ ಮೊಳಕೆಯೊಡೆಯುವುದು ಹೆಚ್ಚಾಗುತ್ತದೆ. ಹೂವು ಮತ್ತು ಕಾಯಿಗಳು ದ್ವಿಗುಣವಾಗುತ್ತವೆ.
- ಭೌತಿಕ, ರಾಸಾಯನಿಕ ಮತ್ತು ಜೈವಿಕ ಪರಿಸರವು ಬೇರಿನ ಸುತ್ತಲೂ ಹಸನಾಗುತ್ತದೆ, ಅಲ್ಲದೆ ನೆಲದಲ್ಲಿ ರೋಗಪ್ರಸಾರ ನಿಯಂತ್ರಣದಲ್ಲಿರುತ್ತದೆ.
- ದ್ಯುತಿ ಸಂಶ್ಲೇಷಣೆ ಕಾರ್ಯವು ಅಧಿಕವಾಗುತ್ತದೆ.
- ಸಸ್ಯದ ಮೇಲೆ ಸಾವಯವ ವಸ್ತುಗಳಿಂದ ತಯಾರಿಸಿದ ಪರಿಣಾಮ ಹೆಚ್ಚಾಗುತ್ತದೆ.
ಪಶುಸಂಗೋಪನೆಯಲ್ಲಿ ಪರಿಣಾಮಕಾರಿ ಸೂಕ್ಷ್ಮಜೀವಿಗಳು:
- ಜಾನುವಾರುಗಳ ಹೊಟ್ಟೆಗೆ ಸಂಬಂಧಪಟ್ಟ ರೋಗಗಳನ್ನು ಹತೋಟಿಯಲ್ಲಿಡುತ್ತವೆ.
- ಮಾಂಸ, ಹಾಲು, ಮೊಟ್ಟೆಗಳು ವಿಶೇಷವಾದ ಗುಣಮಟ್ಟದ್ದಾಗಿರುತ್ತವೆ.
- ಅಧಿಕ ಬೆಲೆಯ ಜೀವನಿರೋಧಕ (ಆಂಟಿಬಯೋಟಿಕ್)ಗಳನ್ನು ಬಳಸುವ ಅಗತ್ಯವಿರುವುದಿಲ್ಲ.
- ಮುಖ್ಯವಾಗಿ ಜೀವಿಗಳ ಮೇಲಿನ ಅನವಶ್ಯಕ ಒತ್ತಡ ಕಡಿಮೆಯಾಗುತ್ತದೆ.
- ಕಾಯಿಲೆ ಸಂಬಂಧ ಔಷಧಿಗಳ ಖರ್ಚು ಕಡಿಮೆಯಾಗುತ್ತದೆ. ಪರಿಣಾಮಕಾರಿ ಸೂಕ್ಷ್ಮಜೀವಿಗಳನ್ನು ಕುಡಿಯುವ ನೀರಿಗೆ ಸೇರಿಸಿ ಅಥವಾ ಆಹಾರದ ಜತೆಗೆ ಸೇರಿಸಿ ಜಾನುವಾರುಗಳಿಗೆ ಕೊಡಬಹುದು. ಹಾಲು ಕರೆಯುವ ಹಸುವಿಗೆ ೫೦-೧೦೦ ಗ್ರಾಮ್ ಸೂಕ್ಷ್ಮಜೀವಿಗಳನ್ನು ಆಹಾರದ ಜೊತೆಗೆ ಕುಡುವುದರಿಂದ ಒಳ್ಳೆಯ ಹಾಲನ್ನು ಪಡೆಯಬಹುದು. ಹಸುವಿನ ಕರುವಿಗೆ ೧೦-೨೦ ಗಾಮ್ ಕೊಡುವುದರಿಂದ ಅವು ಬಲಿಷ್ಠವಾಗಿ ಬೆಳೆಯುವುದು ಕಂಡುಬಂದಿದೆ. ನೀರು ಮತ್ತು ಪರಿಣಾಮಕಾರಿ ಸೂಕ್ಷ್ಮಜೀವಿಗಳನ್ನು ಬೆರೆಸಿ ದನಕರುಗಳು ತಿನ್ನುವ ಆಹಾರದ ಮೇಲೆ ಸಿಂಪಡಿಸಬಹುದಾಗಿದೆ. ನೀರಿಗೆ ಶೇಕಡ ಒಂದು ಭಾಗದಷ್ಟು ಪರಿಣಾಮಕಾರಿ ಸೂಕ್ಷ್ಮಜೀವಿಗಳನ್ನು ಸೇರಿಸಿ ದನದ ಕೊಟ್ಟಿಗೆಯ ಗೋಡೆಗಳ ಮೇಲೆ ಸಿಂಪಡಿಸಿದರೆ ಒಳ್ಳೆಯದೆಂದು ಹೇಳಲಾಗುತ್ತದೆ. ದನಗಳು ಮಲಗಲು ಸ್ಥಳದಲ್ಲಿ ಅಕ್ಕಿ ತೌಡು ಮತ್ತು ೫೦ ಗ್ರಾಂನಷ್ಟು ಪರಿಣಾಮಕಾರಿ ಸೂಕ್ಷ್ಮಜೀವಿಗಳನ್ನು ಒಂದು ಚದರ ಮೀಟರ‍್ನಲ್ಲಿ ಹರಿಡಿದರೆ ಒಳ್ಳೆಯದೆಂದು ಕಂಡುಕೊಳ್ಳಲಾಗಿದೆ.
ಮೀನುಗಳ ಬೇಸಾಯ ಕಾರ್ಯದಲ್ಲಿ ಪರಿಣಾಮಕಾರಿ ಸೂಕ್ಷ್ಮಜೀವಿಗಳು:
- ಈ ಸೂಕ್ಷ್ಮ ಜೀವಿಗಳ ಬಳಕೆಯಿಂದ ಮೀನಿನ ವೃದ್ಧಿಗಾಗಿ ಕೊಳ್ಳುವ ಔಷಧಿಗಳ ಬಳಕೆ ತಗ್ಗಿಸಬಹುದು.
- ಮೀನುಗಳ ಮರಣ ಸಂಖ್ಯೆಯನ್ನು ನಿಯಂತ್ರಿಸಬಹುದು.
- ಮಿನುಗಳು ಬೆಳೆಯುವ ಕೊಳ (ಅಕ್ವೇರಿಯಮ್/ Aquarium)ದಲ್ಲಿನ ನೀರು ಬದಲಾಯಿಸುವ ಅಗತ್ಯವಿರುವುದಿಲ್ಲ.
- ಪರಿಣಾಮಕಾರಿ ಸೂಕ್ಷ್ಮಜೀವಿಗಳು ಪ್ರಕೃತಿಯ ವರದಾನವೆಂದು ಹೇಳಬಹುದಾಗಿದೆ.
- ಪರಿಣಾಮಕಾರಿ ಸೂಕ್ಷ್ಮಜೀವಿಗಳ ಜತೆಗೆ ಮೀನಿನ ಕೃಷಿ ಹೆಚ್ಚು ಲಾಭದಾಯಕವೆಂದು ವರದಿಯಾಗಿದೆ.
ಇತರ ಪ್ರಯೋಜನಗಳು:
- ಕೊಳಚೆ ನೀರನ್ನು ಶುದ್ಧಗೊಳಿಸುವಲ್ಲಿ, ಕಲುಷಿತ ಕೆರೆ, ನದಿಗಳನ್ನು ಶುದ್ಧಿಮಾಡುವಲ್ಲಿ ಇವುಗಳನ್ನು ಬಳಕೆ ಮಾಡಬಹುದು.
- ಕಾಂಪೋಸ್ಟ ಮತ್ತು ಬೇಸಾಯಲ್ಲಿನ ಹಸಿರು ವ್ಯರ್ಥ ಪದಾಥಗಳ ಕೊಳೆಯುವಿಕೆ ಹೆಚ್ಚಿಸಬಹುದಾಗಿದೆ.
- ತಗ್ಗು ಪ್ರದೇಶಗಳಲ್ಲಿ ತುಂಬಿದ ನಿರುಪಯುಕ್ತ ವಸ್ತುಗಳಿಂದ ಹೊರಹೊಮ್ಮುವ ಮಿಥೇನ್ ಮತ್ತು ಇತರೆ ವಿಷ ಅನಿಲಗಳನ್ನು ಇವು ಕಡಿಮೆ ಮಾಡುತ್ತವೆ. ಜೊತೆಗೆ ಕೀಟಗಳು ಹೆಚ್ಚಾಗುವ ಪ್ರಮೇಯವನ್ನೂ ತಗ್ಗಿಸುತ್ತವೆ.
- ಪಾರ್ಕ್‌ಗಳಲ್ಲಿ ಮತ್ತು ಗಾಲ್ಫ್ ಮೈದಾನದಲ್ಲಿರುವ ಕೊಳಗಳಲ್ಲಿ ಪಾಚಿ, ಶೈವಲಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ.
- ಚೆರನೋಬಿಲ್(ರಷ್ಯ) ನ್ಯೂಕ್ಲಿಯಾರ್ ಘಟಕದ ಸಿಎಸ್ ೧೩ ರಿಂದಾದ ಕಲುಷಿತ ಭೂಮಿಯನ್ನು ಮುಕ್ತವಾಗಿಸುವಲ್ಲಿ ಇವು ಮುಖ್ಯ ಪಾತ್ರ ವಹಿಸಿವೆ.
- ಪರಿಣಾಮಕಾರಿ ಸೂಕ್ಷ್ಮಜೀವಿಗಳು ನಮ್ಮ ಕರುಳಿನಲ್ಲಿದ್ದು ಆರೋಗ್ಯವನ್ನು ಕಾಪಾಡಲು ವಿಶೇಷ ಪಾತ್ರವಹಿಸುತ್ತವೆ. ಇದೊಂದು ಪ್ರಕೃತಿಯ ಕೊಡುಗೆ.
- ಇವು ಹುದುಗುಕಾರಕಗಳಾಗಿ ಮತ್ತು ಆಂಟಿಆಕ್ಸಿಡೆಂಟ್(Antioxidant)ಗಳಾಗಿ ಕೆಲಸ ಮಾಡುತ್ತವೆ.
- ಸಂಸ್ಕರಿಸಿದ ಅಕ್ಕಿ ತೌಡಿನೊಂದಿಗೆ ಇವುಗಳನ್ನು ಬೆರೆಸಿ, ಪೋಷಕ ಆಹಾರವಾಗಿ ಬಳಸಬಹುದಾಗಿದೆ. ಅಲ್ಲದೆ ಈ ಜೀವಿಗಳಿಂದ ಉಪಯುಕ್ತ ಉಪ್ಪನ್ನು ತಯಾರಿಸಬಹುದಾಗಿದೆ.
- ಈ ಸೂಕ್ಷ್ಮಾಣುಗಳಿಂದ ಕಾಯಿಲೆಯನ್ನು ತಡೆಯೊಡ್ಡುವ ಔಷಧಿಗಳನ್ನು ತಯಾರಿಸುವ ಸಾಧ್ಯತೆ ಮತ್ತೊಂದು ಆಶಾದಾಯಕ ಬೆಳವಣಿಗೆ.
- ಅಕ್ಕಿತೌಡು, ಸಮುದ್ರಕಳೆ ಮತ್ತು ಕಂದು ಬಣ್ಣದ ಅಕ್ಕಿ ಮತ್ತು ಪರಿಣಾಮಕಾರಿ ಸೂಕ್ಷ್ಮಜೀವಿಗಳಿಂದ ದಕ್ಷ ಆಹಾರ ವಸ್ತುಗಳನ್ನು ಮತ್ತು ಆಂಟಿಆಕ್ಸಿಡೆಂಟ್‌ಗಳನ್ನು ತಯಾರಿಬಹುದು. ಇವುಗಳನ್ನು ಬಳಸುವುದರಿಂದ ಕಾಯಿಲೆಯನ್ನು ಗುಣಪಡಿಸುವ ಶಕ್ತಿಯು ಹೆಚ್ಚಾಗುತ್ತದೆ.

No comments:

Post a Comment