ಶುಭಾಶಯಗಳು

Welcome to DBAUPS Kayyar

Monday, 25 October 2021

 ಕಯ್ಯಾರ್  ಡೋನ್  ಬೋಸ್ಕೊ ಶಾಲಾ ರಕ್ಷಕ - ಶಿಕ್ಷಕ ಸಂಘದ ಮಹಾಸಭೆ

  ಬಂದ್ಯೋಡು : : ಕಯ್ಯಾರ್ ಡೋನ್  ಬೋಸ್ಕೊ ಶಾಲೆಯ ರಕ್ಷಕ - ಶಿಕ್ಷಕ ಸಂಘದ ಮಹಾಸಭೆ ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಸಂಚಾಲಕ ಹಾಗೂ ಕಯ್ಯಾರು ಕ್ರಿಸ್ತರಾಜ ದೇವಾಲಯದ ಧರ್ಮಗುರು ಫಾದರ್   ಹೆರಿ  ಡಿ ಸೋಜ ಅಧ್ಯಕ್ಷತೆ ವಹಿಸಿದ್ದರು.

   ಅತಿಥಿ ಗಳಾಗಿ ಗ್ರಾಮ ಪಂಚಾಯತ್ ಸದಸ್ಯ ಅವಿನಾಶ್ ಮಚಾದೊ  ಉಪಸ್ಥಿತರಿದ್ದರು.  

 ಮುಖ್ಯೋಪಾಧ್ಯಾಯ ಪೀಟರ್ ರೊಡ್ರಿಗಸ್  ಶಾಲಾರಂಭದ ಮಾರ್ಗಸೂಚಿ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ  ನೀಡಿದರು.

ಸಭೆಯಲ್ಲಿ ಆರೋಗ್ಯ ಸಮಿತಿ ರೂಪಿಕರಣ , ಶಾಲಾ  ಮಧ್ಯಾಹ್ನದೂಟ  ಸಮಿತಿ  ರಚನೆ ನಡೆಯಿತು . ವೇದಿಕೆಯಲ್ಲಿ  ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಚಿದಾನಂದ ಮಯ್ಯ , ಎಂ .  ಪಿ . ಟಿ . ಎ ಅಧ್ಯಕ್ಷೆ ರೇಣುಕಾ  ಮೊದಲಾದವರು ಉಪಸ್ಥಿತರಿದ್ದರು.

 ವಿವಿಧ  ಸ್ಪರ್ಧಾ  ವಿಜೇತರಿಗೆ ಸ್ಮರಣಿಕೆ ಯನ್ನು ಫಾದರ್ ಹೆರಿ  ಡಿ ಸೋಜ ವಿತರಿಸಿದರು.

ಶಿಕ್ಷಕಿ ಶಾಲಿನಿ ಡಿ ಸೋಜ  ಸ್ವಾಗತಿಸಿ, ಜ್ಯೋತಿ ಕ್ರಾಸ್ತ ವಂದಿಸಿದರು . ಜ್ಯೋತಿ  ಎಂ . ಡಿ ಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು.

 ಸಭೆಯಲ್ಲಿ ನೂತನ ಸಾಲಿನ ರಕ್ಷಕ  ಶಿಕ್ಷಕ ಸಂಘ ವನ್ನು  ಆಯ್ಕೆ ಮಾಡಲಾಯಿತು . ಅಧ್ಯಕ್ಷರಾಗಿ ಚಿದಾನಂದ ಮಯ್ಯ  ಪುನರಾಯ್ಕೆ ಯಾದರು . ಎಂ . ಪಿ . ಟಿ ಎ  ಅಧ್ಯಕ್ಷರಾಗಿ ರಶ್ಮಿ  ಚೇವಾರ್ ರವರನ್ನು  ಆಯ್ಕೆ ಮಾಡಲಾಯಿತು

No comments:

Post a Comment